Tuesday, December 28, 2021

ಎನಗೆ ತುಸು ಅನುಮಾನ

ಇದು ನನ್ನ ಭಾರತ ದೇಶನಾ
ಎನಗೆ ತುಸು ಅನುಮಾನ 

ಧರ್ಮದ ಹೆಸರಲ್ಲಿ ರಾಜಕೀಯ
ಮತಾಂತರದ ಹೆಸರಲ್ಲಿ ದೌರ್ಜನ್ಯ
ಹಾಸ್ಯಗಾರರ ಮೇಲೆ ಸ್ವಯಂಪ್ರೇರಿತ ಕೇಸ್
ದ್ವೇಷದ ಬಾಷಣಕ್ಕೆ ಮಾನತುಂಬಿ ಆಸ್ವಾದಿಸುವ ಪೊಲೀಸ್

ಇದು ನನ್ನ ಭಾರತ ದೇಶನಾ
ಎನಗೆ ತುಸು ಅನುಮಾನ 

ಪುಂಡು ಪೋಕರಿಗಳು ಶಾಲೆಗೆ ನುಗ್ಗಿ ದಾಳಿ
ಅಲ್ಪಸಂಖ್ಯಾತರು ಹೇಳುವುದು ಯಾರ ಬಳಿ
ಶಿಕ್ಷಣ ಇಲ್ಲದವ ರಾಜ್ಯದ ಆದಿಕಾರಿ
ಸಂವಿಧಾನದ ಅರಿವಿಲ್ಲದೆ ಮಾತನಾಡುವ ನಾಗರಿಕ

ಇದು ನನ್ನ ಭಾರತ ದೇಶನಾ
ಎನಗೆ ತುಸು ಅನುಮಾನ 

ಆರ್ಥಿಕತೆ ನೆಲಕಚ್ಚಿದೆ
ಸಂಪತ್ತು ರಾಜಕಾರಣಿಯ ಕಿಸೆಯಲ್ಲಿದೆ
ಶಿಕ್ಷಣದ ಹಣ ದೇವಸ್ತಾನದಲ್ಲಿದೆ
ಗೋವಿನ ಆರೋಗ್ಯ ಮಾನವನಿಗಿಂತ ಉತ್ತಮವಾಗಿದೆ

ಇದು ನನ್ನ ಭಾರತ ದೇಶನಾ
ಎನಗೆ ತುಸು ಅನುಮಾನ 

ಬ್ಯಾಂಕುಗಳು ಅಪಾಯದಲ್ಲಿದೆ
ಸರಕಾರಿ ಸಂಸ್ಥೆಗಳು ಸುದಾರಣೆಯಾಗಬೇಕಾಗಿದೆ
ತೆರಿಗೆ ಕಟ್ಟಿದರೂ ಮಾರ್ಗದಲ್ಲಿ ಸುಂಕ ವಸೂಲಿ ಮಾಡಲಾಗುತ್ತಿದೆ
ಅದರೂ ಜನರ ಜೀವನ ಕುರುಡಗಿದೆ

ಎನಗೆ ತುಸು ಅನುಮಾನ 
ಇವೆಲ್ಲಾ ನಮ್ಮ ದೇಶದಲ್ಲಿ ಮಾತ್ರನಾ

ಕಿರು ಕಾರ್ಮೆಲ್

Monday, December 13, 2021

ನಲುವತ್ತು ದಿನಗಳ ಪಯಣ

ನಲುವತ್ತು ದಿನಗಳ ಪಯಣ
ಸಾಗಿತು ದೇವಾಲಯದ ವರೆಗೆ
ಯೇಸುವನ್ನು ಮಾಡಲು ಸುದ್ದಿಕರಣ
ಕೊನೆಗೆ ಸಮರ್ಪಿಸಲು ಸರ್ವೇಶ್ವರನಿಗೆ

ತಿಳಿದಿತ್ತು ಸಮಾಜಕ್ಕೆ ಮರಿಯಳ ಮಗನೆಂದು
ಬಾವಿಸಿಕೊಂಡರು ಜೋಸೆಫ ಬಡವನೆಂದು
ಕಾಣಿಕೆಯಾಗಿ ಎರಡು ಪರಿವಾಳವನ್ನು ನೋಡಿ
ಕೆಲವರಿಗೆ ಮಾತ್ರ ತಿಳಿದಿತ್ತು ಯೇಸು ದೇವಾ ಕುಮಾರನೆಂದು

ಕಣ್ಣೀರನ್ನು ಒರೆಸಲು ಕಾದು ಕುಳಿತ ಸೀಮಿಯೋನ
ಸಾಯನು ದೇವಾ ಕುಮಾರನನ್ನು ನೋಡದೇ ಎಂದನು
ಅಂಗಣದಲ್ಲಿ ಉದ್ದರಕನಿಗೆ ನೀರಿಕ್ಷೀಸುತ್ತಾ ಇದ್ದನು
ಯೇಸುವನ್ನು ನೋಡಿ ಇವನೇ ಅವನು ಎಂದನು

ಆಶ್ಚರ್ಯವಾಯಿತು ಜೋಸೆಫನಿಗೆ 
ಸೀಮಿಯೋನಿನ ಮಾತನ್ನು ಕೇಳಿ
ನುಡಿಯನ್ನು  ಬಚ್ಚಿಟ್ಟಲು ಮರಿಯಲು ಹೃದಯದಲ್ಲಿ
ಮುಂದಿನ ಪಯಣ ಸುಗಮವಾಗಲಿ ಎಂದು

ಕಿರು ಕಾರ್ಮೆಲ್ 


Sunday, December 12, 2021

ಹನ್ನೆರಡು ಶಿಷ್ಯರೊಂದಿಗೆ

ಜೀವನ ಸಾಗಿತು ಹನ್ನೆರಡು ಶಿಷ್ಯರೊಂದಿಗೆ
ಗುಡ್ಡ ನೀರು ಮತ್ತು ಕಲ್ಲು ಮುಳ್ಳುಗಳೊಂದಿಗೆ
ಸ್ವರ್ಗ ರಾಜ್ಯದ ಆಶ್ವಸನೆ ನೀಡಲು ಜನರ ಆತ್ಮಗೆ
ಪ್ರಸರಿಸಿ  ದೇವರ ಸಾಮ್ರಾಜ್ಯ   ಇತರರಿಗೆ

ಜನರ ಕಷ್ಟಕ್ಕೆ ದೈರ್ಯತುಂಬಿ
ಮಾಡಿದರು ಅವರ ರೋಗವಾಸಿ 
ಇದನ್ನು ನೋಡಿ ಹರಿಯಿತು ನೀರು ಕಣ್ಣುತುಂಬಿ
ಹೀಗೆ ಯೇಸಾದರು ಜನರಿಗೆ ಸ್ವರ್ಗ ರಾಜ್ಯದ ನಿವಾಸಿ

ಹೊಟ್ಟೆ ಕಿಚ್ಚು ಉರಿಯಿತು ಪರಿಜೇಯರ
ಒಳ್ಳೆಯ ಕೆಲಸ ನೋಡಿ ಯೇಸು ಕ್ರಿಸ್ತರವರ
ತಡೆಯಲಾಗಳಿಲ್ಲ ಹೊಗಳಿಕೆ ಇತರರ
ಕೊನೆಗೆ ಕೊಲೆಯೇ ಅವರ ದೃಢ ನಿರ್ದಾರ

ತಪಿಷ್ಟ ಎಂದು ಕರೆ ತಂದರು ರಾಜರೆದುರು
ಮರಣದಂಡಣೆ ನೀಡಲು ಎಲ್ಲರೆದುರು
ಸುಳ್ಳು ಸಾಕ್ಷಿ ನೀಡಿ ರಾಜನ ಹೊಗಳಿದರು
ಹೀಗೆ ಯೇಸುವನ್ನು ಶಿಲುಬೆಗೇರಿಸಿದರು

ಸಾಯೋನ ನಾವು ಕ್ರಿಸ್ತನಿಗಾಗಿ
ಸತ್ಯವನ್ನು ಮೇಲೆತ್ತಿ ನಮ್ಮ ಜನರಿಗಾಗಿ
ಪ್ರೀತಿಸೋನ ನಮ್ಮ ವೈರಿಯನ್ನು ಯೇಸುವಿಗಾಗಿ
ಹೀಗೆ ನಾವು ಸಾಯೋನ ಸತ್ಯಕ್ಕಾಗಿ

ಕಿರು ಕಾರ್ಮೆಲ್

Jesus coming at 3 O'Clock


One day a woman got a phone call. It was Jesus on the phone. And He said; I'm coming to your house today at 3.
So she got all busy getting ready, cleaning the house. About 12:30 PM there was a knock on the door. She opened the door and there was a little kid out there. He said; Ma'am I've had nothing to eat all day, can you spare some food. She said; O go away I'm busy I'm busy, Jesus is coming at 3 and I don't have time for you. 
She went in the house getting ready and cleaning the house. After 45 minutes or so there was another knock on the door. It was a woman a destitute, she had a baby in her arms. She said; Ma'am, would you mind helping us, we've had no place to live and my baby needs food, anyway you can just allow us in for a few hours. She said; Go away go away, Jesus is coming at 3 I'm busy. She went back in the house. 
After a while another knock came. There stood a very poor old man. He said; Ma'am I'm in need of some clothing, can you help me? She said; O I'm so busy, Jesus is coming at 3. She went back in the house. 
3 O'clock came and she's all ready, everything is ready for Jesus. 3 O'clock hits right on the dot, there was no knock but the phone rings. She picks up the phone, it was Jesus. She said; Lord, I thought you're coming at 3. Jesus said; I came 3 times and you threw me out. 

Make sure you recognize Him when He shows up. He may not show up the way you think He will. 
Proverbs 19:17 He that hath pity upon the poor lendeth unto the LORD; and that which he hath given will he pay him again.
Matthew 25:40 And the King shall answer and say unto them, Verily I say unto you, In as much as ye have done it unto one of the least of these my brethren, ye have done it unto me.
*God loves you*

ಪ್ರತಿ ಕ್ಷಣ

ನಿಮಿಷಗಳು ಸರಿದ ಮೇಲೆ
ಮತ್ತೆ ಮರಳಿ ಬರುವುದೇ ಆ ವೇಳೆ
ಅನುಭವಿಸು ಕ್ಷಣದ ಉಲ್ಲಾಸ
ಇದುವೇ ನಮಗೆ ಕೊನೆಯ ಅವಕಾಶ

ಹೀಗೆಯೇ ಇರುವಾಗ
ಯೋಚನೆ ನೀ ಮಾಡಬೇಡ 
ದುಖಃ ನಿನಗೆ ಆಗುವಾಗ
ಕಣ್ಣೀರನ್ನು ಒರೆಸಲು ಮರೆಯಬೇಡ

ಯಾರು ಇಲ್ಲದಿದ್ದರೂ 
ಸೂರ್ಯ ಉದಯಿಸುವನು
ಜಗವೇ ಅಂಧಕಾರವಾದರೆ 
ಚಂದ್ರನು ಆಕರ್ಷಿಸುವನು

ಸಂತೋಷದಿಂದಿರು ಯಾರೇ ದೂರ ಹೋದರೂ
ಸೇಡು ತೋರಿಸಿದರು ನೀ ತೋರಿಸು ಪ್ರೀತಿಯ
ಮುಷ್ಟಿಯೊಳಗೆ ಕೋಪವ ಹಿಡಿದು
ಬಿಸಾಡು ದೂರ ಯಾರ ಕಣ್ಣಿಗೂ ಬೀಳದೆ

ಸುಖವಾಗಿರು ಪ್ರತಿ ಕ್ಷಣ
ಅನುಭವಿಸಿ  ಕ್ಷಣದ ಉಲ್ಲಾಸ 

ಕಿರು ಕಾರ್ಮೆಲ್

Friday, December 10, 2021

ಕಣ್ಣಿದ್ದೂ ಕಾಣದ ಮಾನವ

ನೀ ಮಾನವ

ಕಾಣದಂತೆ ಮಾಯವಾದ ಮಾನವ
ಕಣ್ಣಿಗೆ ಕಾಣದ ರೋಗಕ್ಕೆ
ನಾನು ನನ್ನದು ಎಂದು ನುಡಿದವ
ಕೊನೆಗೆ ಸೇರಿದ ಬೆಂಕಿ/ ಮಣ್ಣಿಗೆ

ತೈಲ ಬೆಲೆ ಗಗನಕೆ ಏರುತಿದೆ
ಕಣ್ಣಿಗೆ ಕಾಣದಂತೆ ಸಮಾಜ ನೋಡುತಿದೆ
ಬಡವರ ನೋವು ಅರ್ಥವಾಗದೆ
ಸಮಾಜದ ಕಣ್ಣೀರನ್ನು ಒರೆಸುವ ರಾಜಕೀಯ

ವಿದ್ಯೆವಿದ್ದರೂ ಕೆಲಸವಿಲ್ಲ
ಮಾಡಿದ ಸಾಲ ತೀರಿಸಲು ನನ್ನಿಂದ ಸಾದ್ಯವಿಲ್ಲ
ಊರೂರು ತಿರುಗಿದರೂ ಕೇಳುವವರು ಯಾರು ಇಲ್ಲ
ಸೂರ್ಯ ಮಲಗುವಾಗ ಒಂದೂಟಕ್ಕೂ ಗತಿ ಇಲ್ಲ

ಮಾನವೀಯ ಮರೆತ ಮಾನವ
ಕಣ್ಣುಮುಚ್ಚಿ ಸಂಚಾರಿಸುವ ಮನುಜ
ಪ್ರಾಣಿ ಪಕ್ಷಿ ಯೆಂದರೆ ಪ್ರಾಣ ಬಿಡುವವಾ
ನಮ್ಮನೆ ವಧೆಯುವನು ಹಸಿವಿಗೆ ಅದನ್ನು ತಿಂದರೆ

ಮಾತನಾಡಲು ಬಯವಾಗುತ್ತಿದೆ
ಮರುದಿನ ಮಾದ್ಯಮದಲ್ಲಿ ಬರುವ ಸಾದ್ಯಾವಿದೆ
ಸುಳ್ಳು ಸುದ್ದಿ ಪ್ರಕಟವಾಗುವಾಗ
ನನ್ನವರೇ ಕಲ್ಲು ಬಿಸಾಡುವರು ಎನಗೆ

ಕಿರು ಕಾರ್ಮೆಲ್

ಮತಾಂತರ ನಿಷೇಧ ಎಂಬ ಅಸಂವಿಧಾನಾತ್ಮಕ ಮಸೂದೆ

 

“ಮತಾಂತರ ಎನ್ನುವುದು ಅಪರಾಧವಲ್ಲ. ಅದೊಂದು ಬಿಡುಗಡೆಯ ಅಸ್ತ್ರ. ಎಲ್ಲಿ ಸಮಾನತೆ ಇಲ್ಲವೋ ಅಲ್ಲಿಂದ ಹೊರನಡೆದು ನಮಗೆ ಬೇಕಾದ ಧರ್ಮವನ್ನು ಸ್ವೀಕರಿಸುವ ಅಧಿಕಾರವನ್ನು ಈ ನೆಲದ ಸಂವಿಧಾನ ನಮಗೆ ನೀಡಿದೆ. ಸಂವಿಧಾನಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರೇ ಬೌದ್ಧ ಧರ್ಮಕ್ಕೆ ಮತಾಂತರವಾದರು. ಆ ಮೂಲಕ ಶೋಷಿತ ವರ್ಗಗಳು, ಸಮಾನತೆಯ ತವಕದಲ್ಲಿರುವ ಎಲ್ಲರೂ ಸಹ ತಮಗಿಷ್ಟ ಬಂದ ಧರ್ಮವನ್ನು ಆರಿಸಿಕೊಳ್ಳಲು ಮೇಲ್ಪಂಕ್ತಿ ಹಾಕಿಕೊಟ್ಟರು.”

ಮತಾಂತರ ಎನ್ನುವುದು ಸ್ವಾತಂತ್ರ್ಯಾ ನಂತರದಿಂದಲೂ ಕೋಮುವಾದಿ ಶಕ್ತಿಗಳಿಗೆ ಸಮಾಜವನ್ನು ಒಡೆಯುವ ತಂತ್ರಗಳಲ್ಲೊಂದಾಗಿರುವುದು ಗುಟ್ಟಾಗೇನೂ ಉಳಿದಿಲ್ಲ. ಪ್ರಕೃತಿ ವಿಕೋಪದಂತೆ ಆಗಿದ್ದಾಂಗೆ, ವಿಶೇಷವಾಗಿ ಚುನಾವಣೆಯ ಸಂದರ್ಭಗಳಲ್ಲಿ ಅಥವಾ ಸಮಾಜದಲ್ಲಿ ತಮ್ಮ ವಿರೋಧದ ವಾತಾವರಣ ಮಡುಗಟ್ಟಿದಾಗ, ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನದ ಭಾಗವಾಗಿ ಮತಾಂತರ ಎಂಬ ಸವಕಲು ಅಸ್ತ್ರವನ್ನು ಬಳಸಿ, ನಾಗರಿಕ ಸಮಾಜದಲ್ಲಿ ಶಾಂತಿ ಕದಡುವುದು ಇತ್ತೀಚೆಗೆ ತೀರಾ ಸಾಮಾನ್ಯವಾಗಿದೆ. ಅದೇ ರೀತಿ, ಸಮಾನತೆಯನ್ನು ಇಡೀ ಜಗತ್ತಿಗೆ ಸಾರಿದ ಸಾಮರಸ್ಯದ ಬೀಡಾದ ಕರ್ನಾಟಕದಲ್ಲಿ ಪ್ರಸ್ತುತ ಅಧಿಕಾರದಲ್ಲಿರುವ ಸರ್ಕಾರದ ಕೃಪಾಕಟಾಕ್ಷ ಇರುವ ಈ ಶಕ್ತಿಗಳು ಮತಾಂತರದ ವಿಷಯವನ್ನು ಮುನ್ನಲೆಗೆ ತಂದಿದ್ದಾರೆ. ಮುಂಬರುವ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಲು ಸಕಲ ಸಿದ್ಧತೆಗಳನ್ನೂ ಸರ್ಕಾರ ನಡೆಸುತ್ತಿದೆ. ಈ ಸಂದರ್ಭದಲ್ಲಿ ಮತಾಂತರ ಎಂಬ ವಿಷಯದಲ್ಲಿ ನಮ್ಮ ಸಂವಿಧಾನ ಏನು ಹೇಳುತ್ತದೆ? ಇಂತಹ ಪ್ರಕರಣಗಳಲ್ಲಿ ಈ ದೇಶದ ಘನ ನ್ಯಾಯಾಲಯಗಳು ನೀಡಿರುವ ತೀರ್ಪುಗಳು ಏನು? ಎಂಬುದನ್ನು ಈ ಲೇಖನದಲ್ಲಿ ವಿಶ್ಲೇಷಿಸುತ್ತಿದ್ದೇನೆ.

ಸಂವಿಧಾನ ಮತ್ತು ಮತಾಂತರ


ಭಾರತದ ಸಂವಿಧಾನವು ಅನುಚ್ಛೇದ 25ರಲ್ಲಿ ಈ ದೇಶದ ಪ್ರತಿ ಪ್ರಜೆಗೂ ಸಹ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿದೆ. ಅದಲ್ಲದೆ ತಮ್ಮ ಧರ್ಮವನ್ನು ಸ್ವತಂತ್ರವಾಗಿ ಪ್ರಚಾರಮಾಡಬಹುದು ಎಂದೂ ಸಹ ಹೇಳಿದೆ. ಈ ಕುರಿತು ಇದೇ ವರ್ಷ ಏಪ್ರಿಲ್ 2021ರಲ್ಲಿ ಭಾರತದ ಸುಪ್ರೀಂ ಕೋರ್ಟ್ ನಡೆಸಿದ ಪಿಐಎಲ್ (ಸಾರ್ವಜನಿಕ ಹಿತಾಸಕ್ತಿ ಅರ್ಜಿ)ಯ ವಿಚಾರಣೆಯನ್ನು ಗಮನಿಸಬಹುದು. ಅಡ್ವೊಕೇಟ್ ಅಶ್ವಿನಿ ಕುಮಾರ್ ಉಪಾಧ್ಯಾಯ್ ಅವರು ದೇಶದಾದ್ಯಂತ ದೊಡ್ಡ ಮಟ್ಟದಲ್ಲಿ ಧಾರ್ಮಿಕ ಮತಾಂತರಗಳು ಆಗುತ್ತಿವೆ ಎಂದು ಆರೋಪಿಸಿ, ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಂಡ ಅಂದಿನ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಜಸ್ಟೀಸ್ ರೋಹಿಂಟನ್ ಎಫ್ ನಾರಿಮನ್ “18 ವರ್ಷಕ್ಕೂ ಮೇಲ್ಪಟ್ಟ ವ್ಯಕ್ತಿಯು ಯಾಕೆ ಬೇರೆ ಧರ್ಮವನ್ನು ಆರಿಸಿಕೊಳ್ಳಬಾರದು? ಇದ್ಯಾವ ರೀತಿಯ ಅರ್ಜಿ” ಎಂದು ಅರ್ಜಿದಾರರನ್ನು ಪ್ರಶ್ನಿಸಿ, ಈ ರೀತಿಯ ಅಸಂಬದ್ಧ ಅರ್ಜಿಗಳನ್ನು ಹಾಕಿದರೆ ನಿಮ್ಮ ಮೇಲೆ ದೊಡ್ಡ ಮಟ್ಟದ ದಂಡವನ್ನು ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. “ಮೊದಲು ಈ ಅರ್ಜಿ ಹಿಂತೆಗೆದುಕೊಳ್ಳಿ ಅಥವಾ ಇದರ ಪರ ವಾದಿಸಿ, ಮುಂದೆ ಬರುವ ರಿಸ್ಕ್ ತೆಗೆದುಕೊಳ್ಳಲು ಸಿದ್ಧವಾಗಿರಿ” ಎಂದದ್ದಲ್ಲದೆ, ಮುಂದುವರೆದು ಸಂವಿಧಾನದ 25ನೇ ಅನುಚ್ಛೇದ ಕುರಿತು ತಿಳಿಹೇಳಿದರು. ಈ ದೇಶದ ಯಾವುದೇ ವ್ಯಕ್ತಿ ತನಗಿಷ್ಟವಾದ ಧರ್ಮವನ್ನು ಆಚರಿಸಲು, ಹಾಗೂ ಪ್ರಚಾರಮಾಡಲು ಸ್ವತಂತ್ರನಾಗಿದ್ದಾನೆ ಎಂದು ಸಂವಿಧಾನವೇ ಹೇಳಿರುವಾಗ ಆ ಹಕ್ಕನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎನ್ನುತ್ತದೆ ಸುಪ್ರೀಂ ಕೋರ್ಟ್.
ಇನ್ನು ಇದೇ ವರ್ಷ, “ಪಿ. ಮುನೀಶ್ವರಿ ವರ್ಸಸ್ ದಿ ಸೆಕ್ರೆಟರಿ ಟು ತಮಿಳುನಾಡು ಗವರ್ನಮೆಂಟ್ ಆಂಡ್ ಅದರ್ಸ್” ಪ್ರಕರಣದಲ್ಲಿ ಮದ್ರಾಸ್ ಹೈಕೋರ್ಟ್ನ ಮಧುರೈ ವಿಭಾಗೀಯ ಪೀಠವು ಕೇವಲ ಚರ್ಚಿಗೆ ಹೋಗುವುದರಿಂದ ಅಥವಾ ಶಿಲುಬೆಯನ್ನು ಮತ್ತು ಫೋಟೊಗಳನ್ನು ಮನೆಯಲ್ಲಿ ತೂಗುಹಾಕುವುದರಿಂದ ಅಥವಾ ಕೊರಳಲ್ಲಿ ಧರಿಸುವುದರಿಂದ ಒಬ್ಬ ವ್ಯಕ್ತಿ ಆ ಧರ್ಮಕ್ಕೆ ಮತಾಂತರವಾಗಿದ್ದಾನೆ ಎಂದು ಭಾವಿಸಲಾಗದು ಎಂಬ ವಿಶೇಷ ತೀರ್ಪನ್ನು ನೀಡಿದೆ. ಇನ್ನೂ ಹತ್ತೂ ಹಲವು ಮತಾಂತರ ಪ್ರಕರಣಗಳಲ್ಲಿ ಈ ದೇಶದ ಘನತೆವೆತ್ತ ನ್ಯಾಯಾಲಯಗಳು ಮತಾಂತರಕ್ಕೆ ಸಂವಿಧಾನದಲ್ಲಿ ಅವಕಾಶ ಇವೆ ಎನ್ನುತ್ತಾ ಸಂವಿಧಾನದ ಆಶಯಗಳನ್ನು ಎತ್ತಿಹಿಡಿದಿವೆ.

ಮತಾಂತರ ನಿಷೇಧ ಕಾಯ್ದೆ


ಸಂವಿಧಾನದ 25ನೇ ಅನುಚ್ಛೇದದಲ್ಲಿರುವ “ಪ್ರಚಾರ” (ಧರ್ಮವನ್ನು ಪ್ರಚಾರಮಾಡುವುದು) ಎಂಬ ಪದವು ಸಂವಿಧಾನ ರಚನಾ ಸಮಿತಿಯಲ್ಲಿ ಸಾಕಷ್ಟು ಚರ್ಚೆಗೊಳಪಟ್ಟಿದೆ. ಸಂವಿಧಾನದ ಇತರೆಲ್ಲಾ ವಿಷಯಸೂಚಿಗಳಿಗಿಂತ ಈ ಪದವೇ ಅತಿ ಹೆಚ್ಚು ಕಾಲ ಚರ್ಚೆಗೊಳಗಾಗಿದ್ದು ಎನ್ನುತ್ತಾರೆ ಸಂವಿಧಾನ ತಜ್ಞರು. ನಂತರ ಸಾಕಷ್ಟು ಚರ್ಚೆ ಮತ್ತು ಸಂವಾದಗಳ ನಂತರ ಈ ಪದವನ್ನು ಸಂವಿಧಾನದಲ್ಲಿ ಆಳವಡಿಸಲಾಯಿತು. ಇದು ಭಾರತದಲ್ಲಿ ಯಾವುದೇ ವ್ಯಕ್ತಿಯು ತನ್ನ ಧರ್ಮವನ್ನು ಪ್ರಚಾರ ಮಾಡಲು ಸ್ವತಂತ್ರನಾಗಿದ್ದಾನೆ ಎಂಬುದನ್ನು ಸೂಚಿಸುತ್ತದೆ. ಪ್ರಸ್ತುತ ದೇಶದಲ್ಲಿ ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ ಮತ್ತು ಉತ್ತರಾಖಂಡ್ ರಾಜ್ಯಗಳಲ್ಲಿ ಮತಾಂತರ ನಿಷೇಧ ಕಾಯ್ದೆಗಳು ಜಾರಿಯಲ್ಲಿವೆ. ಈಗ ಜಾರ್ಖಂಡ್ ಹಾಗೂ ಕರ್ನಾಟಕ ರಾಜ್ಯಗಳೂ ಸಹ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಲು ಚಿಂತನೆ ನಡೆಸಿವೆ.

ಮತಾಂತರ ನಿಷೇಧ ಕಾಯ್ದೆ ಸಂವಿಧಾನಾತ್ಮಕವೇ?


ರಾಜ್ಯಗಳು ಜಾರಿಗೊಳಿಸುವ ಮತಾಂತರ ನಿಷೇಧ ಕಾಯ್ದೆಗಳು ಸಂವಿಧಾನದ ಸ್ಪಷ್ಟ ಉಲ್ಲಂಘನೆಯಾಗಿವೆಯಲ್ಲದೆ, ಅವು ಸಂವಿಧಾನ ವಿರೋಧಿಯಾಗಿವೆ ಎನ್ನುತ್ತಾರೆ ಹಿರಿಯ ನ್ಯಾಯವಾದಿ ಹಾಗೂ ಸಿಕ್ಕಿಂ ಹೈಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಾಧೀಶರಾಗಿರುವ ಜಸ್ಟೀಸ್ ಪೆರ್ಮೊದ್ ಕೊಹ್ಲಿ. “ಬಲವಂತದ ಹಾಗೂ ಆಮಿಷಗಳನ್ನು ನೀಡಿ ಮಾಡುವ ಮತಾಂತರದ ಕುರಿತು ಈಗಾಗಲೇ ಸಂವಿಧಾನವು ಹಲವು ಕ್ರಮಗಳನ್ನು ಉಲ್ಲೇಖಿಸಿರುವಾಗ, ಮತ್ತೆ ಮತಾಂತರ ನಿಷೇಧ ಕಾಯ್ದೆಯನ್ನು ತರುವುದು ಅದನ್ನು ಪುನರಾವರ್ತಿಸಿದಂತಾಗುತ್ತದೆ. ರಾಜ್ಯಗಳಲ್ಲಿ ಮತಾಂತರವನ್ನೇ ನಿಷೇದಿಸುವುದು ಸಂವಿಧಾನದ 25ನೇ ಅನುಚ್ಛೇದದ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಅದರ ಬದಲು ಬಲವಂತದ ಹಾಗೂ ಆಮಿಷಗಳನ್ನು ನೀಡಿ ಮಾಡುವ ಮತಾಂತರದ ಕುರಿತು ಮಾತ್ರ ಕಾನೂನುಗಳನ್ನು ತರುವುದು ಒಳಿತು” ಎಂದು ಜಸ್ಟಿಸ್ ಕೊಹ್ಲಿ ಅಭಿಪ್ರಾಯ ಪಡುತ್ತಾರೆ.

ಹಿರಿಯ ನ್ಯಾಯವಾದಿ ಹಾಗೂ ಪ್ರಖ್ಯಾತ ಸಂವಿಧಾನ ತಜ್ಞರು ಆಗಿರುವ ಆರ್ ಎಸ್ ಚೀಮಾ ಮತಾಂತರ ನಿಷೇಧ ಕಾಯ್ದೆಯ ಕುರಿತು ಮಾತನಾಡುತ್ತಾ “ಸಂಪೂರ್ಣ ಮತಾಂತರ ನಿಷೇಧವನ್ನು ಮಾಡುವುದು ಸಾಧ್ಯವಿಲ್ಲ. ಹಾಗೆ ಒಂದು ವೇಳೆ ನಿಷೇಧಿಸಬೇಕೆಂಬ ಕಾನೂನುಗಳನ್ನು ತಂದರೆ ಅದು ಸಂವಿಧಾನದ ಉಲ್ಲಂಘನೆಯಾಗುತ್ತದೆ. ಸಂವಿಧಾನ ರಚನೆಯ ವೇಳೆ ಮತಾಂತರ ವಿಷಯದ ಕುರಿತು ಸಾಕಷ್ಟು ಅವಲೋಕಿಸಿಯೇ ಧಾರ್ಮಿಕ ಸ್ವಾತಂತ್ರ್ಯವನ್ನು ಹಾಗೂ ಧರ್ಮವನ್ನು ಪ್ರಚಾರ ಮಾಡುವ ಸ್ವಾತಂತ್ರ್ಯವನ್ನು ನಮ್ಮ ಪೂರ್ವಸೂರಿಗಳು ನೀಡಿದ್ದಾರೆ.” ಎಂದು ಹೇಳುತ್ತಾರೆ. ಮತಾಂತರ ನಿಷೇಧ ಕಾಯ್ದೆ ಅನುಷ್ಠಾನಗೊಂಡರೆ ಆ ಕಾಯ್ದೆಯ ಮೂಲ ಉದ್ದೇಶ ಮರೆಯಾಗಿ ಅದನ್ನು ಕಿಡಿಗೇಡಿಗಳು ಅಲ್ಪಸಂಖ್ಯಾತರನ್ನು ಹಿಂಸಿಸಲು, ಅವರಿಗೆ ಸಮಸ್ಯೆ ಸೃಷ್ಟಿಸಲು ಉಪಯೋಗಿಸಿಕೊಳ್ಳುತ್ತಾರೆ ಎಂದೂ ಸಹ ಅನೇಕ ನ್ಯಾಯವಾದಿಗಳು ಅಭಿಪ್ರಾಯ ಪಡುತ್ತಾರೆ.
ಉತ್ತರ ಪ್ರದೇಶ ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಾಗ ಅನೇಕ ನ್ಯಾಯಾಧೀಶರು, ವಕೀಲರು ಹಾಗೂ ಸಂವಿಧಾನ ತಜ್ಞರು ಅದು ಸಂವಿಧಾನ ವಿರೋಧಿ ಕಾನೂನಾಗಿದೆ ಎಂದು ಹೇಳಿದ್ದಾರೆ. ದೆಹಲಿ ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶರು ಹಾಗೂ ರಾಷ್ಟ್ರೀಯ ಕಾನೂನು ಆಯೋಗದ ಮಾಜಿ ಅಧ್ಯಕ್ಷರು ಆಗಿರುವ ಜಸ್ಟೀಸ್ ಎ ಪಿ ಷಾ “ಮತಾಂತರ ನಿಷೇಧ ಕಾಯ್ದೆ ಸಂವಿಧಾನದಲ್ಲಿ ನೀಡಿರುವ ಮೂಲಭೂತ ಹಕ್ಕುಗಳಾದ ಜೀವಿಸುವ ಹಕ್ಕು ಮತ್ತು ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನೇ ಕಸಿದುಕೊಳ್ಳುವಂತಿದೆ. ಕೂಡಲೇ ಈ ಕಾಯ್ದೆಯನ್ನು ರದ್ದುಗೊಳಿಸಬೇಕು” ಎಂದು ಒತ್ತಾಯಿಸುತ್ತಾರೆ. ಇನ್ನು ಸುಪ್ರೀಂ ಕೋರ್ಟ್ ಮಾಜಿ ನ್ಯಾಯಾಧೀಶರಾದಂತಹ ಜಸ್ಟೀಸ್ ಮದನ್ ಬಿ ಲೋಕೂರ್ “ಈ ಕಾಯ್ದೆಯು ಸಾಂವಿಧಾನಿಕವಾಗಿ ಸಿಂಧುವಾಗಬೇಕೆಂದರೆ ಒಂದು ದೊಡ್ಡ ಪವಾಡವೇ ನಡೆಯಬೇಕು. ಮೂಲತಃ ಇದು ಸಂವಿಧಾನದ ಮೂಲಭೂತ ಹಕ್ಕನ್ನೇ ಪ್ರಶ್ನಿಸಿರುವುದರಿಂದ, ಇದರ ಸಾಂವಿಧಾನಿಕ ಸಿಂಧುತ್ವಕ್ಕೆ ಅವಕಾಶವೇ ಇಲ್ಲ ಎಂದು ದೃಢವಾಗಿ ಹೇಳುತ್ತಾರೆ.

ಬಲವಂತದ, ಆಮಿಷವೊಡ್ಡಿ ಮಾಡುವ ಮತಾಂತರ vs ಸ್ವಇಚ್ಛೆಯ ಮತಾಂತರ


ಬಲವಂತವಾಗಿ ಒಬ್ಬರನ್ನು ಮತಾಂತರ ಮಾಡುವುದು ಅಥವಾ ಆಮಿಷಗಳನ್ನು ನೀಡಿ ಮತಾಂತರ ಮಾಡುವುದು ನಿಸ್ಸಂದೇಹವಾಗಿ ತಪ್ಪು. ಕಥೋಲಿಕ್ ಚರ್ಚು ಸಹ ಇದೇ ಅಭಿಪ್ರಾಯವನ್ನು ಹೊಂದಿದೆ. ನನಗನಿಸಿದಂತೆ ಬಲವಂತದ ಮತಾಂತರ ಪ್ರಕರಣಗಳು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕಾಣಸಿಗುವುದು ಬಹಳ ಕಡಿಮೆ. ನಮ್ಮ ಸಂವಿಧಾನ ಅಸ್ತಿತ್ವಕ್ಕೆ ಬಂದ ನಂತರವಂತೂ ಬಲವಂತದ ಮತಾಂತರಗಳು ಬಹುತೇಕ ಇಲ್ಲವಾಗಿದೆ. ಇನ್ನು ಆಮಿಷಗಳನ್ನು ಒಡ್ಡಿ ಮತಾಂತರ ಮಾಡುವುದೂ ಸಹ ತಪ್ಪಾದರೂ ಇಂತಹ ಪ್ರಕರಣಗಳಿಗೆ ಒಂದು ನಿರ್ದಿಷ್ಟ ಪರಿಹಾರಾತ್ಮಕ ಚೌಕಟ್ಟು ಇಲ್ಲ ಎನ್ನಬಹುದು. ಆಮಿಷ ಪಡೆದುಕೊಂಡವರು ಯಾರೂ ತಮ್ಮನ್ನು ಆಮಿಷದ ಮೂಲಕ ಮತಾಂತರ ಮಾಡುತ್ತಿದ್ದಾರೆ ಎಂದು ದೂರು ನೀಡುವುದಿಲ್ಲ. ಆಮಿಷದ ಮೂಲಕ ಮತಾಂತರ ಮಾಡಿದರೂ ಸಹ ಫಲಾನುಭವಿಗಳಿಗೆ ತಾವು ಇತರೆ ಧರ್ಮಕ್ಕೆ ಮತಾಂತರವಾಗುತ್ತಿದ್ದೇವೆ ಎಂಬ ಸ್ಪಷ್ಟ ಅರಿವು ಇರುತ್ತದೆ.

ಇನ್ನು ಮೇಲೆ ಹೆಸರಿಸಲಾದ ಐದು ರಾಜ್ಯಗಳಲ್ಲಿ ಜಾರಿಯಾಗಿರುವ ಮತಾಂತರ ನಿಷೇಧ ಕಾಯ್ದೆಯ ಸಾರಾಂಶವನ್ನು ನೋಡಿದರೆ ಇಲ್ಲಿ ಸಾಕ್ಷಿಗಳನ್ನು ಪ್ರಸ್ತುತಪಡಿಸಬೇಕಾದ ಹೊಣೆಗಾರಿಕೆಯನ್ನು ಆರೋಪಿಗಳ ಮೇಲೆ ಹೊರಿಸಲಾಗಿದೆ. ಸಂವಿಧಾನಾತ್ಮಕವಾಗಿ ಯಾವುದೇ ಒಂದು ಬಲವಂತದ ಮತಾಂತರ ಕಂಡು ಬಂದರೆ ಅದನ್ನು ನಿರೂಪಿಸಲು ಅಭಿಯೋಗ (ಪ್ರಾಸಿಕ್ಯೂಷನ್) ಸಾಕ್ಷಿಗಳನ್ನು ನ್ಯಾಯಾಲಯದ ಮುಂದೆ ಪ್ರಸ್ತುತಪಡಿಸಬೇಕು. ಆದರೆ, ಈ ಹೊಸ
ಕಾಯ್ದೆಗಳ ಪ್ರಕಾರ, ಇಂತಹ ಪ್ರಕರಣಗಳಲ್ಲಿ ಸಾಕ್ಷಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕಾದ ಹೊಣೆಗಾರಿಕೆ ಆರೋಪಿಯ ಮೇಲೆ ಬೀಳುತ್ತದೆ. ಅಂದರೆ ಯಾರೇ ಆರೋಪ ಮಾಡಲಿ ಆ ಆರೋಪಗಳಿಗೆಲ್ಲ ಆರೋಪಿಯೇ ಸಾಕ್ಷಿಗಳನ್ನು ಹುಡುಕುವಂತಹ ವಾತಾವರಣ ನಿರ್ಮಾಣವಾಗುತ್ತದೆ. ಹೀಗಿರುವಾಗ ಈ ಕಾಯ್ದೆಯ ಸ್ಪಷ್ಟ ಉದ್ದೇಶ ಅಲ್ಪಸಂಖ್ಯಾತರನ್ನು ಹಣಿಯುವುದೇ ಆಗಿದೆ. ಒಂದುವೇಳೆ ಈ ಕಾಯ್ದೆ ಜಾರಿಯಾದರೆ ಖಂಡಿತವಾಗಿಯೂ ಇದನ್ನು ಕೋಮುವಾದಿ ಶಕ್ತಿಗಳು ಅಲ್ಪಸಂಖ್ಯಾತರ ಮೇಲೆ ಹಲ್ಲೆ ಮಾಡುವ ಆಯುಧವನ್ನಾಗಿ ಮಾಡಿಕೊಳ್ಳುತ್ತಾರೆ.

ಮತಾಂತರ ಎನ್ನುವುದು ಅಪರಾಧವಲ್ಲ. ಅದೊಂದು ಬಿಡುಗಡೆಯ ಅಸ್ತ್ರ. ಎಲ್ಲಿ ಸಮಾನತೆ ಇಲ್ಲವೋ ಅಲ್ಲಿಂದ ಹೊರನಡೆದು ನಮಗೆ ಬೇಕಾದ ಧರ್ಮವನ್ನು ಸ್ವೀಕರಿಸುವ ಅಧಿಕಾರವನ್ನು ಈ ನೆಲದ ಸಂವಿಧಾನ ನಮಗೆ ನೀಡಿದೆ. ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರೇ ಬೌದ್ಧ ಧರ್ಮಕ್ಕೆ ಮತಾಂತರವಾದರು. ಆ ಮೂಲಕ ಶೋಷಿತ ವರ್ಗಗಳು, ಸಮಾನತೆಯ ತವಕದಲ್ಲಿರುವ ಎಲ್ಲರೂ ಸಹ ತಮಗಿಷ್ಟ ಬಂದ ಧರ್ಮವನ್ನು ಆರಿಸಿಕೊಳ್ಳಲು ಮೇಲ್ಪಂಕ್ತಿ ಹಾಕಿಕೊಟ್ಟರು. ಬಲವಂತದ ಪ್ರಕರಣಗಳು ನಡೆದಿದ್ದು ಆ ಕುರಿತು ಯಾರಾದರು ದೂರು ನೀಡಿದರೆ ಅದನ್ನು ಕೂಲಂಕಷವಾಗಿ ಪರಿಶೀಲಿಸಿ, ಅದರಲ್ಲಿ ಭಾಗಿಯಾದವರ ವಿರುದ್ಧ ಸರ್ಕಾರವು ಕ್ರಮ ಕೈಗೊಳ್ಳಲಿ. ಆದರೆ ಒಂದೆರಡು ಪ್ರಕರಣಗಳನ್ನು ಮುಂದಿಟ್ಟುಕೊಂಡು ಇಡೀ ಸಮುದಾಯಕ್ಕೆ ಮಾರಕವಾಗುವಂತಹ ಅಸಂವಿಧಾನಿಕ ಕಾನೂನನ್ನು ತರುವುದು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತದೆ. 2018ರಲ್ಲಿ ನಡೆದಂತಹ ಚರ್ಚ್ ದಾಳಿಗಳಂತಹ ಅನೇಕ ಪ್ರಕರಣಗಳು ಮತಾಂತರದ ಹೆಸರಿನಲ್ಲಿ ಪುನರಾವರ್ತಿಸುವ ಸಂಭವಗಳನ್ನೂ ಸಹ ತಳ್ಳಿಹಾಕುವಂತಿಲ್ಲ.

By

 ಅಜಯ್ ರಾಜ್